ಬೊಗತ ಜಲಪಾತವು ತೆಲಂಗಾಣದ ಮುಲುಗು ಜಿಲ್ಲೆಯ ವಜ಼ೀಡು ಮಂಡಲ್‍ನಲ್ಲಿ ಚೀಕುಪಲ್ಲಿ ಹೊಳೆಯ ಮೇಲೆ ಸ್ಥಿತವಾಗಿರುವ ಒಂದು ಜಲಪಾತವಾಗಿದೆ. ಇದು ಭದ್ರಾಚಲಂನಿಂದ ೧೨೦ ಕಿ.ಮಿ., ಮುಲುಗುದಿಂದ ೯೦ ಕಿ.ಮಿ., ವಾರಂಗಲ್‍ನಿಂದ ೧೪೦ ಕಿ.ಮಿ., ಹೈದರಾಬಾದ್‍ನಿಂದ ೩೨೯ ಕಿಲೋಮೀಟರ್ ದೂರದಲ್ಲಿದೆ. ಇದು ತೆಲಂಗಾಣ ಪ್ರದೇಶದಲ್ಲಿನ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. == ಪ್ರವಾಸ == ವರ್ಷಾದ್ಯಂತ ನೀರು ಹರಿಯುವುದಾದರೂ, ಜೂನ್ ಮತ್ತು ನವೆಂಬರ್ ನಡುವೆ ಮಾನ್ಸೂನ್ ನಂತರ, ಹೆಚ್ಚಾಗಿ ನೀರು ಹರಿಯುವಾಗ ಭೇಟಿಕೊಡಲು ಒಳ್ಳೆ ಸಮಯವಾಗಿದೆ. ಯಾವುದೇ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಭೇಟಿಕಾರರು ಜಲಪಾತವನ್ನು ತಲುಪಲು ಸ್ವಲ್ಪ ದೂರ ಬೆಟ್ಟಗುಡ್ಡ ಹತ್ತಿ ಇಳಿದು ಮಾಡಬೇಕಾಗುತ್ತದೆ. ಆಡುಮಾತಿನಲ್ಲಿ ಬೊಗತ ಜಲಪಾತವನ್ನು "ತೆಲಂಗಾಣದ ನಯಾಗರ" ಜಲಪಾತವೆಂದು ಕರೆಯಲಾಗುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2016-03-30 ವೇಬ್ಯಾಕ್ ಮೆಷಿನ್ ನಲ್ಲಿ.